ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಹಿರಿಯಡ್ಕ ಮೇಳ: ವೀರಭದ್ರನ ವೇಷಕ್ಕೆ ರಜತ ಕಿರೀಟ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಡಿಸೆ೦ಬರ್ 21 , 2013
ಡಿಸೆ೦ಬರ್ 21, 2013

ಹಿರಿಯಡ್ಕ ಮೇಳ: ವೀರಭದ್ರನ ವೇಷಕ್ಕೆ ರಜತ ಕಿರೀಟ

ಉಡುಪಿ ಹಿರಿಯಡ್ಕ ಪೇಟೆಯವರು ಹಾಗೂ ಕ್ಷೇತ್ರಾಭಿಮಾನಿಗಳ ವತಿಯಿಂದ ಹಿರಿಯಡ್ಕ ಯಕ್ಷಗಾನ ಮೇಳದ ವೀರಭದ್ರ ವೇಷದ ಬಳಕೆಗಾಗಿ ರಚಿಸಲ್ಪಟ್ಟ ರಜತ ಕಿರೀಟ ಸಮರ್ಪಣಾ ಸಮಾರಂಭವು ಡಿ. 22ರಂದು ಸಂಜೆ 6ಕ್ಕೆ ಹಿರಿಯಡ್ಕ ಶ್ರೀ ವೀರಭದ್ರ ದೇವಳದ ಬಾಕಿಮಾರು ಗದ್ದೆಯಲ್ಲಿ ಪ್ರದೀಪ ಕಲ್ಕೂರ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಹಿರಿಯ ಮದ್ದಳೆವಾದಕ, ಜಾನಪದ ತಜ್ಞ ಹಿರಿಯಡಕ ಗೋಪಾಲ ರಾವ್‌ ಅವರು ರಜತ ಕಿರೀಟವನ್ನು ಮೇಳಕ್ಕೆ ಸಮರ್ಪಿಸುವರು. ಎಂಐಟಿ ಪ್ರಾಧ್ಯಾಪಕ ಎಸ್‌.ವಿ. ಉದಯಕುಮಾರ್‌ ಶೆಟ್ಟಿ ಶುಭ ಹಾರೈಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆಡಳಿತಾಧಿಕಾರಿ ಎಚ್‌. ಕೃಷ್ಣಮೂರ್ತಿ, ಡಾ| ಸುನಿಲ್‌ ಹೆಗ್ಡೆ, ಉದ್ಯಮಿ ಕೆ. ನಟರಾಜ ಹೆಗ್ಡೆ, ಹಿರಿಯಡ್ಕ ದೇವಳದ ಅರ್ಚಕ ನಾರಾಯಣ ಭಟ್‌ ಭಾಗವಹಿಸುವರು.

ಅದೇ ದಿನ ಸಂಜೆ 5ಕ್ಕೆ ಹಿರಿಯಡ್ಕ ಶ್ರೀ ಗಣೇಶ ಕಲಾಮಂದಿರದ ಎದುರಿನಿಂದ ರಜತ ಕಿರೀಟವನ್ನು ಮೆರವಣಿಗೆಯಲ್ಲಿ ತರಲಾಗುವುದು. ಸಂಜೆ 7ರಿಂದ ಹಿರಿಯಡ್ಕ ಮೇಳದವರಿಂದ 'ಹಿರಿಯಡ್ಕ ಕ್ಷೇತ್ರ ಮಹಾತೆ¾' ಪ್ರಸಂಗ ಪ್ರದರ್ಶನಗೊಳ್ಳಲಿದೆ ಎಂದು ಊರ ಹತ್ತು ಸಮಸ್ತರ ಪರವಾಗಿ ಹಿರಿಯಡ್ಕ ಶ್ರೀನಿವಾಸ ರಾವ್‌ ತಿಳಿಸಿದ್ದಾರೆ.

ಕೃಪೆ : http://www.udayavani.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ